ಉದಾತ್ತ ಮನಸ್ಸುಗಳ ಒಕ್ಕೂಟ, ಸೇವಾ ಕಾರ್ಯವೇ ನಮ್ಮ ಧ್ಯೇಯ ಪ್ರತಿಯೊಬ್ಬ ಅಗತ್ಯವಿರುವ ವಿಶ್ವಕರ್ಮ ಸಮುದಾಯದ ಎಲ್ಲಾ ಬಂಧುಗಳಿಗೆ ನೆರವಾಗಲು ಶ್ರಮಿಸುತ್ತಿರುವ ಸಂಸ್ಥೆ. ಬನ್ನಿ, ಕೈಜೋಡಿಸಿ ಮತ್ತು ಬದಲಾವಣೆಗೆ ಕಾರಣರಾಗಿ.
ವಿಶ್ವಕರ್ಮ ಯುವ ಸಮೂಹ ಸಂಸ್ಥೆಯನ್ನು ಸಮಾಜದ ಅಭಿವೃದ್ಧಿ, ಯುವಕರ ಸಬಲೀಕರಣ ಹಾಗೂ ಅಗತ್ಯವಿರುವವರಿಗೆ ನೆರವು ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ನಮ್ಮ ಸಂಸ್ಥಾಪಕರ ದೃಷ್ಟಿ ಸಮಾಜದಲ್ಲಿ ಏಕತೆ, ಸಹಕಾರ ಮತ್ತು ಸೇವಾ ಮನೋಭಾವವನ್ನು ಬೆಳೆಸುವುದಾಗಿದೆ.
ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಾಯ ಮಾಡಿದರೆ, ಅನೇಕ ಕುಟುಂಬಗಳ ಬದುಕಿನಲ್ಲಿ ಆಶಾದೀಪ ಬೆಳಗಬಹುದು ಎಂಬ ನಂಬಿಕೆಯಿಂದ ಈ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆ ಹಾಗೂ ಮಾನವೀಯ ಕಾರ್ಯಗಳ ಮೂಲಕ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಾವು ಬದ್ಧರಾಗಿದ್ದೇವೆ.
“ಸೇವೆಯೇ ಶ್ರೇಷ್ಠ ಧರ್ಮ, ಮಾನವೀಯತೆಯೇ ನಮ್ಮ ಶಕ್ತಿ.”
ನಮ್ಮ ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಎಲ್ಲಾ ದಾನಿಗಳು, ಸ್ವಯಂಸೇವಕರು ಹಾಗೂ ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳು.
- ಕೀರ್ತಿ ಆಚಾರ್ ಬ್ರಹ್ಮಾವರ
(ಸ್ಥಾಪಕ ಅಧ್ಯಕ್ಷರು)
ನಮ್ಮ ಬಗ್ಗೆ
ನಮ್ಮ ಧ್ಯೇಯ
ವಿಶ್ವಕರ್ಮ ಸಮುದಾಯದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ವಿಶ್ವಕರ್ಮ ಸಮುದಾಯದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಹಸಿವು ನಿವಾರಣೆಗೆ ಆದ್ಯತೆ ನೀಡಿ, ಸುಸ್ಥಿರ ಅಭಿವೃದ್ಧಿ ಮತ್ತು ಸಮಗ್ರ ಸಮಾಜ ನಿರ್ಮಾಣವೇ ನಮ್ಮ ಮುಖ್ಯ ಉದ್ದೇಶವಾಗಿದೆ.
ನಮ್ಮ ದೃಷ್ಟಿಕೋನ
ವಿಶ್ವಕರ್ಮ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಮಾನ ಅವಕಾಶಗಳು ದೊರೆಯುವಂತೆ ಮಾಡಿ, ಸ್ವಾವಲಂಬಿ, ಸಶಕ್ತ, ಸಮೃದ್ಧ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಹೊಂದಿರುವ ಸಮಾಜವನ್ನು ನಿರ್ಮಿಸುವುದೇ ನಮ್ಮ ಸುದೀರ್ಘ ದೃಷ್ಟಿಕೋನವಾಗಿದೆ.
ಸಮುದಾಯದ ಮೇಲಿನ ಪ್ರಭಾವ
ಕಳೆದ ಎರಡು ವರ್ಷಗಳಿಂದ ನಾವು ವಿಶ್ವಕರ್ಮ ಸಮುದಾಯದ ಕುಟುಂಬಗಳ ಜೀವನದಲ್ಲಿ ಆಶಾ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಅವರ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದೇವೆ.
ಜಾಹೀರಾತು
ಸೇವೆ ನಮ್ಮ ಸಂಕಲ್ಪ
ಸಮಾಜದ ಹಿಂದುಳಿದ ಮತ್ತು ಅಗತ್ಯವಿರುವ ಜನರಿಗೆ ಶಿಕ್ಷಣ, ಆರೋಗ್ಯ, ಆಹಾರ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಾವು ಬದ್ಧರಾಗಿದ್ದೇವೆ. ನಿಮ್ಮ ಅಮೂಲ್ಯ ದೇಣಿಗೆಯ ಮೂಲಕ ಆಶೆಯನ್ನು ಬೆಳೆಸಿ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಉತ್ತೇಜಿಸುವ ಸಮಾಜವನ್ನು ನಿರ್ಮಿಸುವುದು ನಮ್ಮ ಮುಖ್ಯ ಧ್ಯೇಯವಾಗಿದೆ.

ಶಿಕ್ಷಣ ಬೆಂಬಲ
ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು, ವಿದ್ಯಾರ್ಥಿವೇತನ ಮತ್ತು ಶಾಲಾ ಸೌಲಭ್ಯಗಳನ್ನು ಒದಗಿಸುವುದು.

ಆಹಾರ ವಿತರಣೆ
ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಪ್ರತಿದಿನ ಅಗತ್ಯವಿರುವವರಿಗೆ ಪೌಷ್ಟಿಕ ಆಹಾರ ವಿತರಣೆ.

ಆರೋಗ್ಯ ನೆರವು
ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳು ಮತ್ತು ಉಚಿತ ಔಷಧಿಗಳ ವಿತರಣೆ.

ಹಿರಿಯ ನಾಗರಿಕರ ಸೇವೆ
ಆಧಾರವಿಲ್ಲದ ವೃದ್ಧರಿಗೆ ವೃದ್ಧಾಶ್ರಮದ ಸೌಕರ್ಯ ಮತ್ತು ಪ್ರೀತಿಯ ಆರೈಕೆ ನೀಡುವುದು.
ನಮ್ಮ ಬೆಂಬಲ ಮತ್ತು ಸೇವೆ
ನಮ್ಮ ಸಮುದಾಯದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನಾವು ಸದಾ ಬದ್ಧರಾಗಿದ್ದೇವೆ. ಸಮುದಾಯದ ಜನರಿಗೆ ಉತ್ತಮ ಬೆಂಬಲ, ಮಾರ್ಗದರ್ಶನ ಮತ್ತು ಅಗತ್ಯವಾದ ಸೇವೆಗಳನ್ನು ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮತ್ತು ಸಮಾಜದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.
















































ಸಮಾಜದ ಬಡ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ನೆರವಾಗಲು:
* ತುರ್ತು ವೈದ್ಯಕೀಯ ಸಹಾಯ ನಿಧಿ
* ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ನೆರವು
* ಅನಾಥ ಮಕ್ಕಳ ಶಿಕ್ಷಣ ಸಹಾಯ
* ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು
* ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ತುರ್ತು ಸಹಾಯ
ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
* ವಿಶ್ವಕರ್ಮ ಜಯಂತಿ ಆಚರಣೆ
* ಧಾರ್ಮಿಕ ಉಪನ್ಯಾಸಗಳು
* ಭಜನೆ, ಯಕ್ಷಗಾನ, ಸಾಂಸ್ಕೃತಿಕ ಉತ್ಸವಗಳು
* ಮಕ್ಕಳಿಗೆ ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ
* ಸಮಾಜದ ಇತಿಹಾಸದ ದಾಖಲೀಕರಣ
ನಮ್ಮ ಪ್ರಮುಖ ಕಾರ್ಯಗಳಲ್ಲಿ ಒಂದಾಗಿರುತ್ತದೆ. ಮಹಿಳಾ ಮತ್ತು ಯುವ ವಿಭಾಗ ಸಮಾಜದ ಸಮಗ್ರ ಅಭಿವೃದ್ಧಿಗೆ ಮಹಿಳೆಯರು ಹಾಗೂ ಯುವಕರ ಪಾತ್ರ ಅತ್ಯಂತ ಮುಖ್ಯ. ಆದ್ದರಿಂದ:
* ಮಹಿಳಾ ವೇದಿಕೆ
* ಯುವ ನಾಯಕತ್ವ ತರಬೇತಿ
* ಕ್ರೀಡಾಕೂಟಗಳು
* ಆರೋಗ್ಯ ಜಾಗೃತಿ ಕಾರ್ಯಕ್ರಮಗಳು
* ಸ್ವಯಂಸೇವಕ ಸೇವಾ ತಂಡಗಳು
ಜಾಗತಿಕ ವಿಶ್ವಕರ್ಮ ನೆಟ್‌ವರ್ಕ್
ವಿಶ್ವದ ಎಲ್ಲೆಡೆ ಇರುವ ವಿಶ್ವಕರ್ಮ ಬಂಧುಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸಿ, ಅವರ ಅನುಭವ, ಜ್ಞಾನ ಮತ್ತು ಸಂಪನ್ಮೂಲಗಳನ್ನು ಸಮಾಜದ ಅಭಿವೃದ್ಧಿಗೆ ಬಳಸುವುದು ನಮ್ಮ ಗುರಿಯಾಗಿದೆ.
ಸಮಾಜ ಭವನ ಮತ್ತು ಭವಿಷ್ಯದ ಕನಸು
ಸಮಾಜದ ಸಹಕಾರ ದೊರೆತರೆ ಭವಿಷ್ಯದಲ್ಲಿ:
* ವಿಶ್ವಕರ್ಮ ಸಮಾಜ ಭವನ
* ವಿದ್ಯಾರ್ಥಿ ನಿಲಯ (Hostel)
* ಕೌಶಲ್ಯಾಭಿವೃದ್ಧಿ ಕೇಂದ್ರ
* ಗ್ರಂಥಾಲಯ
* ತರಬೇತಿ ಕೇಂದ್ರ
* ವೃದ್ಧಾಶ್ರಮ ಸಹಾಯ ಯೋಜನೆ
* ವಿದ್ಯಾರ್ಥಿವೇತನ ಟ್ರಸ್ಟ್
* ಜಾಗತಿಕ ವಿಶ್ವಕರ್ಮ ಡಿಜಿಟಲ್ ಡೈರೆಕ್ಟರಿ
ಹಾಗೂ ಅನೇಕ ಜನೋಪಯೋಗಿ ಯೋಜನೆಗಳನ್ನು ರೂಪಿಸಬಹುದು.
ನಮ್ಮ ನಂಬಿಕೆ
ನಾವು ಎಲ್ಲರೂ ಒಂದಾಗಿ ನಿಂತರೆ ಯಾವುದೇ ಗುರಿ ಅಸಾಧ್ಯವಲ್ಲ.
ಒಬ್ಬ ವ್ಯಕ್ತಿ ಸಮಾಜವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸಾವಿರಾರು ವಿಶ್ವಕರ್ಮ ಬಂಧುಗಳು ಒಂದೇ ಗುರಿಯೊಂದಿಗೆ ಕೈಜೋಡಿಸಿದರೆ ಶಿಕ್ಷಣ, ಆರ್ಥಿಕತೆ, ಉದ್ಯೋಗ, ಸಮಾಜಸೇವೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೊಸ ಇತಿಹಾಸ ನಿರ್ಮಿಸಬಹುದು.
ಇಂದು ಬ್ರಹ್ಮಾವರದಲ್ಲಿ ನೆಟ್ಟಿರುವ ಈ ಚಿಕ್ಕ ಸಸಿ, ನಾಳೆ ವಿಶ್ವದಾದ್ಯಂತ ನೆರಳು ನೀಡುವ ಮಹಾವೃಕ್ಷವಾಗಬೇಕು ಎಂಬುದು ನಮ್ಮ ಆಶಯ.
“ವಿಶ್ವಕರ್ಮರ ಒಗ್ಗಟ್ಟು – ವಿಶ್ವಕರ್ಮ ಸಮಾಜದ ಶಕ್ತಿ.
ಸೇವೆ, ಶಿಕ್ಷಣ ಮತ್ತು ಸಂಸ್ಕೃತಿಯ ಮೂಲಕ ಸಮೃದ್ಧ ಭವಿಷ್ಯದತ್ತ ನಮ್ಮ ಹೆಜ್ಜೆ.”
ಅವರಿಗೆ ನಿಮ್ಮ ಸಹಾಯ ಅಗತ್ಯವಿದೆ!
ನಮ್ಮ ಸಮುದಾಯದ ಬೆಳವಣಿಗೆ ಮತ್ತು ಸುಧಾರಣೆಗೆ ನಿಮ್ಮ ಬೆಂಬಲ ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬರ ಸಹಾಯ ಮತ್ತು ಸಹಕಾರದಿಂದ ನಾವು ಉತ್ತಮ ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ. ಒಟ್ಟಾಗಿ ಕೈಜೋಡಿಸಿ ನಮ್ಮ ಸಮಾಜವನ್ನು ಇನ್ನಷ್ಟು ಬಲಪಡಿಸೋಣ.
ಸಮಿತಿಯ ಎಲ್ಲಾ ಸದಸ್ಯರು ವಿಶ್ವಕರ್ಮ ಯುವ ಸಮೂಹ
ಉಪಾಧ್ಯಕ್ಷರು : ಉಲ್ಲಾಸ್ ಆಚಾರ್ಯ ಮಾಬುಕಳ | ಪ್ರಧಾನ ಕಾರ್ಯದರ್ಶಿ : ಕೆ ಆರ್ ಗಿರೀಶ್ ಆಚಾರ್ಯ ಕೋಟ | ಕೋಶಾಧಿಕಾರಿ : ಸಚಿನ್ ಆಚಾರ್ಯ ಆಗುಂಬೆ
ಕಾರ್ಯಕಾರಿ ಸಮಿತಿಯ ಸದಸ್ಯರು: ಮಹೇಂದ್ರ ಆಚಾರ್ಯ ಹೆರಂಜೆ | ಮಂಜುನಾಥ್ ಆಚಾರ್ಯ ಬ್ರಹ್ಮಾವರ | ಸುದೀಪ್ ಡಿ ಆಚಾರ್ಯ ಉಪ್ಪಿನಕೋಟೆ
ಅನಿಲ್ ಆಚಾರ್ಯ ಕುಮ್ರಗೋಡು | ಶ್ರೀಮತಿ ಆಚಾರ್ಯ ಮಟಪಾಡಿ
ವಿಶೇಷ ಗೌರವ :
ದಿನೇಶ ಗೋಪಾಲ (ಪದ್ಮ ಗೋಪಾಲ) ಗುಂಡ್ಮಿ ಸಾಲಿಗ್ರಾಮ
“ಸಹಾಯ ಮಾಡುವವರು ಕೆಳಗಿನ ಪಾವತಿ ಆಯ್ಕೆಯನ್ನು ಬಳಸಿ ಸಹಾಯ ಮಾಡಬಹುದು.”
ಬ್ಯಾಂಕ್ ಖಾತೆಯ ಮೂಲಕ ದೇಣಿಗೆ ನೀಡಿ
VISHWAKARMA YUVA SAMUHA (R.)
Canara Bank, Brahmavar Branch
Account number : 10264251476
IFSC Code : CNRB0010264
ನೀವು ಬ್ಯಾಂಕ್ ಕಾರ್ಡ್ ಅಥವಾ ಅಂತರರಾಷ್ಟ್ರೀಯ ಪಾವತಿ ಮೂಲಕ ದೇಣಿಗೆ ನೀಡಬಹುದು. ಮುಂದುವರಿಯಲು ದಯವಿಟ್ಟು ಬಟನ್ ಮೇಲೆ ಕ್ಲಿಕ್ ಮಾಡಿ.